Call Us Now: +91 91412 69230

ಉದ್ಯಮ ಕ್ಷೇತ್ರದ ಸಾಧಕ : ಡಾ| ಜೆರಿ ವಿನ್ಸೆಂಟ್ ಡಾಯಸ್, ಉಡುಪಿ

ಉಡುಪಿ ಸಂತೆಕಟ್ಟೆಯ ಡಾ| ಜೆರಿ ವಿನ್ಸೆಂಟ್ ಡಾಯಸ್, ಉಡುಪಿ ಜಿಲ್ಲೆಯ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆ ‘ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್’ ಇದರ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾಗಿದ್ದು, ಪ್ರಸ್ತುತ ಕ್ರೆಡಾಯ್, ಉಡುಪಿಯ ಅಧ್ಯಕ್ಷರಾಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮದ ಹೊರತಾಗಿ ಸಿನೆಮಾ ನಿರ್ಮಾಣ ಮತ್ತು ಹೋಟೆಲ್ ಉದ್ಯಮದಲ್ಲೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 1995 ರಿಂದ 2022 ವರೆಗೆ, ಉಡುಪಿ ಮತು ಮಣಿಪಾಲದಲ್ಲಿ, 4000 ವಸತಿ ಮತ್ತು 250 ವ್ಯಾಪಾರಿ ಮಳಿಗೆಗಳನ್ನೊಳಗೊಂಡ ಸುಮಾರು 50 ಸಮುಚ್ಚಯಗಳನ್ನು ನಿರ್ಮಿಸಿದ್ದು, ಸ್ಟಾರ್ ದರ್ಜೆಯ ಐಷಾರಾಮಿ ಹೋಟೆಲ್ ಇರುವ, ಉಡುಪಿಯ ಪ್ರಪ್ರಥಮ ಮತ್ತು ಅತೀ ದೊಡ್ಡ ಮಾಲ್ ಮಾಂಡವಿ ಟೈಮ್ಸ್ ಸ್ಕ್ವೇರ್ ಕಟ್ಟಿದ ಹೆಗ್ಗಳಿಕೆ ಡಾ| ಡಾಯಸ್ ಅವರಿಗೆ ಸಲ್ಲುತ್ತದೆ. 4 ಮಲ್ಟಿಫ್ಲೆಕ್ಸ್ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಕೈಗಾರಿಕೋದ್ಯಮಿಯೂ ಅಗಿರುವ ಇವರ ಜೆ. ಜೆ. ಇಂಡಸ್ಟ್ರೀಸ್ ನಲ್ಲಿ ಸೊಲಿಡ್ ಬ್ಲೊಕ್ ತಯಾರಾಗುತ್ತಿವೆ. ಜೆ.ಜೆ. ಸಿನೆ ನಿರ್ಮಾಣ ಸಂಸ್ಥೆಯ ಮೂಲಕ ‘ಮಹಾನದಿ’ ಮತ್ತು ‘ಡಿ.ಕೆ.’ ಎಂಬ ಎರಡು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

ಸಮಾಜಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಯುತರು ಉಡುಪಿಯಲ್ಲಿ ಲಯನ್ಸ್ ಕ್ಲಬ್ ಹಾಗೂ ಇತರ ಸಮಾಜಸೇವಾ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಇವರು ನಿರ್ಮಿಸಿದ ಮಾಂಡವಿ ರಾಯಲ್ ಪ್ರಿನ್ಸ್ ವಸತಿ ಸಂಕೀರ್ಣಕ್ಕೆ ಅತ್ಯುತ್ತಮ ವಸತಿ ಸಂಕೀರ್ಣ ಪ್ರಶಸ್ತಿ ಲಭಿಸಿದೆ. ಇವರ ವೃತ್ತಿ ಕೌಶಲ್ಯಕ್ಕೆ ಕ್ರೆಡಾಯ್ ಕೇರ್ ಮತ್ತು ಸಮಾಜಸೇವೆಗೆ ಉಡುಪಿಯ ಅದಮಾರು ಮಠ, ಮಂಗಳೂರಿನ ಬಂಟರ ಸಂಗಮ, ಬ್ರಾಹೇಯ್ನ್‍ನ ಬಿಲ್ಲವರ ಸಂಘ – ಹೀಗೆ ಹಲವಾರು ಪ್ರಶಸ್ತಿ – ಪುರಸ್ಕಾರಗಳು ಅರಸಿಕೊಂಡು ಬಂದಿವೆ. ಬೆಂಗಳೂರಿನ ನ್ಯಾಶನಲ್ ಇನ್ಸಿಟಿಟ್ಯೂಟ್ ಒಫ್ ಸೋಶಿಯಲ್ ಇಕೊನೊಮಿಕ್ ರಿಫೊರ್ಮ್ಸ್ (ರಿ) ಇವರು ರಾಷ್ಟ್ರೀಯ ಸಮಾಜ ರತ್ನ ಪುರಸ್ಕಾರ ನೀಡಿರುತ್ತಾರೆ. ಇವರ ಸಮಾಜಮುಖಿ ಚಿಂತನೆಗೆ ಅಕಾಡೆಮಿ ಒಫ್ ಗ್ಲೊಬಲ್ ಪೀಸ್ ಇವರು ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದ್ದಾರೆ.

Entrepreneur of the year: Dr Jerry Vincent Dias, Udupi

Dr. Jerry Vincent Dias, Chairman and Managing Director of Mandavi Real Estate Developers is the estate tycoon of Udupi – Manipal for the last three decades. Presently he is the President of CREDAI, Udupi Chapter. So far he has developed 4000 residential and 250 commercial units in 50 projects.  He has built Mandavi Times Square, the first biggest Mall in the Udupi district housing a star-category luxurious hotel.  His architectural marvel in Manipal – Mandavi Royal Prince, was awarded as Best Residential Building from Credai Care Awards. Apart from​   Real estate​,​ he is the promoter and owner of J J Industries which produces solid blocks.

He has produced two Kannada feature films, ‘Mahanadhi’ and ‘DK’ under his production house J J Cine Productions. He is the promoter and owner of  Hotel Sarah International, Manipal. He is actively involved in social work through ​the ​Lions Club and other social service organizations and ​recipient of many awards for his humane work. While Adamar Mutt awarded him with Kala Poshak Award, ​the ​Lions club bestowed on him the Vishwa Bandhu title. Billawara Sangha, Bahrain awarded him Best Business Award and ​the ​National institute for social and Economic Reforms® Bengaluru honored him with National Samaj Ratna Award.  He is awarded the degree of Doctor of Letters from ​the ​Academy of Universal Global Peace 

Leave a comment

Your email address will not be published. Required fields are marked *