Call Us Now: +91 91412 69230

ಕೃಷಿ ಕ್ಷೇತ್ರದ ಸಾಧಕ : ಲಿಯೊ ಫೆರ್ನಾಂಡಿಸ್, ಅಲ್ಲಿಪಾದೆ

ಬಂಟ್ವಾಳದ ಅಲ್ಲಿಪಾದೆಯ ಲಿಯೊ ಫೆರ್ನಾಂಡಿಸ್ ಅಡಿಕೆ – ಕರಿಮೆಣಸು ಕೃಷಿ ಮತ್ತು ಹೈನುಗಾರಿಕೆಯ ಮೂಲಕ ಬದುಕನ್ನು ಕಟ್ಟಿಕೊಂಡಿರುವುದಲ್ಲದೇ, ಆ್ಯಂಟನಿ ಟ್ರೇಡರ್ಸ್ ಸಂಸ್ಥೆಯ ಮೂಲಕ ಊರಿನ ಅಡಿಕೆ ಬೆಳೆಗಾರರಿಂದ ಉತ್ತಮ ಬೆಲೆಗೆ ಅಡಿಕೆ ಖರೀದಿಸಿ, ಬೆಳೆಗಾರರು ಮತ್ತು ವ್ಯಾಪಾರಿಗಳ ನಡುವೆ ಕೊಂಡಿಯಾಗಿದ್ದಾರೆ. ಫೆರ್ನಾಂಡಿಸ್ ಕೆಟರಿಂಗ್ ಎಂಬ ಸಂಸ್ಥೆಯ ಮೂಲಕ ಊಟೋಪಚಾರ ಸೇವಾಉದ್ಯಮವನ್ನೂ ನಡೆಸುತ್ತಿದ್ದಾರೆ. ತೋಟ ಮತ್ತು ಸಂಸ್ಥೆಗಳಲ್ಲಿ ನೂರಾರು ಜನರಿಗೆ ಉದ್ದೋಗಾವಕಾಶ ಕೊಟ್ಟು ಗೌರವಯುತ ಜೀವನೋಪಾಯ ಕಲ್ಪಿಸಿದ್ದಾರೆ. 20 ಎಕ್ರೆ ತೋಟದಲ್ಲಿ 15000 ದಷ್ಟು ಅಡಿಕೆಮರಗಳು, 1000 ದಷ್ಟು ತೆಂಗಿನ ಮರಗಳಿದ್ದು, ವಾರ್ಷಿಕ 350 ಕ್ವಿಂಟಾಲ್ ಅಡಿಕೆ ಮತ್ತು 25000 ತೆಂಗಿನ ಫಸಲು ಬೆಳೆಯುತ್ತಾರೆ. ಗೀರ್, ಜರ್ಸಿ, ಎಚ್.ಎಫ್ ಹೀಗೆ 100 ರಷ್ಟು ಹಸು – ಕರುಗಳಿದ್ದು ಪ್ರತಿದಿನ ಸುಮಾರು 600 ಲೀಟರ್ ಹಾಲು ಸರಬರಾಜು ಮಾಡುತ್ತಾರೆ. ಜೊತೆಗೆ ಕಂಬಳದ ಕೋಣಗಳನ್ನು ಸಾಕುವ ಹವ್ಯಾಸವನ್ನೂ ಬೆಳೆಸಿಕೊಂಡಿದ್ದಾರೆ. ಸರಪಾಡಿ ಮತ್ತು ಅಲ್ಲಿಪಾದೆ ಹಾಲು ಉತ್ಪಾದಕರ ಸಂಘಗಳಿಗೆ 2021 – 22 ರಲ್ಲಿ ಅತೀ ಹೆಚ್ಚು ಹಾಲು ಪೂರೈಸಿದ ದಾಖಲೆಯಿದ್ದು, ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನದಲ್ಲಿ ಬಹುಮಾನ ಪಡೆದಿರುತ್ತಾರೆ.

Agriculturist of the year: Leo Fernandes, Allipade

Leo Fernandes is a farmer with a difference having focused on multiple yields like areca, pepper, coconuts, and dairy farming. The cultivation is spread across 20 acres of land comprising 15000 arecas, and 1000 coconut trees, and yields about 350 quintal areca, and about 25000 coconuts.  He supports local farmers with his outlet Antony Traders, which purchases their areca yields for the best rate in the market. He has about 100 cows ranging in gyr, jersey, and Holstein Friesian cattle breeds. He supplies about 600 liters of milk daily to society and he is the top supplier of milk to Sarapady and Allipade societies during 2021 -22. With his catering wing Fernandes Caterers, he undertakes catering for a crowd of 1000 people, and with all his farming, dairy, and catering enterprise he has been proving a livelihood for hundreds of families in the area.  

Leave a comment

Your email address will not be published. Required fields are marked *